7th August 2025
ಡಂಬಳ: ಗ್ರಾಮದಲ್ಲಿ ವಾಲಮಾರ್ಟ್ ಹಾಗೂ ಐಸಾಪ್ ಫೌಂಡೇಶನ್, ಚಂದನವನ ರೈತ ಉತ್ಪಾದಕ ಕಂಪನಿಯ ಸಂಯೋಗದಲ್ಲಿ ಇಂದು ಡಂಬಳಗ್ರಾಮದ ಶ್ರೀ ತೋಂಟದಾರ್ಯ ದಾಸೋಹ ಭವನದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಜಿ ವೀ ಹಿರೇಮಠ ಗುರುಗಳು, ಆಡಳಿತ ಮಂಡಳಿ ಯ ವ್ಯವಸ್ತಾಪಕರು, ಡಂಬಳ ಇವರು
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸುವ ಪ್ರಸ್ತಾವಿಕವಾಗಿ ಮಾತನಾಡಿದವರು ಆಹಾರ ಪದಾರ್ಥಗಳ ಉತ್ಪಾದನೆಯಂಬುದು ಅತ್ಯಂತ ಸೂಕ್ಷ್ಮ ಹಾಗೂ ಸುಚಿತ್ವದಿಂದ ಕೂಡಿರಬೇಕು ಆದರೆ ಸದ್ಯ ಕಳಪೆ ಆಹಾರ ಸೇವನೆಯಿಂದ, ವ್ಯೆವಸ್ಥಿತವಾದ ಶುದ್ಧ ಆಹಾರ ಉತ್ಪಾದನೆಯ ಕೊರತೆಯಿಂದಾಗಿ ಅನೇಕ ರೋಗಗಳಿಗೆ ತುತ್ತಗುತ್ತಿದ್ದೇವೆ ಅದನ್ನು ಸಾಧ್ಯವಾದಷ್ಟು ಬದಲಾಯಿಸಿಕೊಳ್ಳಬೇಕು ಎಂಬ ಮಾತನ್ನು ತಿಳಿಸಿದರು.
ಅಧ್ಯಕ್ಷತೆಯನ್ನು ಬಸವರಾಜ್ ಬೇವಿನಮರದ, ಅಧ್ಯಕ್ಷರು ಚಂದನವನ ರೈತ ಉತ್ಪಾದಕ ಕಂಪನಿ, ಡಂಬಳ ವಹಿಸಿದರು.
ಸಂಪನ್ಮೂಲ ವ್ಯೆಕ್ತಿಗಳಾಗಿ ಆಗಮಿಸಿದ ಶ್ರೀಮತಿ ಯಶೋಧಾ ಮೇಡಂ, ಇಂದ್ರಪ್ರಸ್ತ ಅಕಾಡೆಮಿ ಫೌಂಡೇಶನ್ ದೆಹಲಿ, ಮಾತನಾಡಿ ಗ್ರಾಮೀಣ ಮಟ್ಟದಲ್ಲಿ ಮಹಿಳೆಯರು ಸ್ವ ಉದ್ಯೋಗವನ್ನು ಹೊಂದುವುದು ಉತ್ತಮ ವಿಚಾರ ಅದೇರೀತಿಯಾಗಿ ಆಹಾರ ಉತ್ಪಾದನ ಘಟಕಗಳನ್ನು ಹೊಂದುವವರು ಹಾಗೂ ಹೊಂದಿದವರು ಎಫ್ ಎಸ್ ಎಸ್ ಏ ಐ ತರಬೇತಿ ಹಾಗೂ ತರಬೇತಿಯ ಪ್ರಮಾಣ ಪತ್ರ ಪಡೆಯುವುದು ಪ್ರಮುಖವಾದುದ್ದು, ಅದನ್ನು ಯಾವರೀತಿ ಪಡೆಯುವುದು ಎಂಬುದನ್ನು ನೋಡುವುದಾದರೆ ಆಹಾರ ಉತ್ಪನ್ನಗಳನ್ನು ತಯಾತಿಸುವಾಗ ಗಮನಿಸಬೇಕಾದ ಅಂಶಗಳು, ಘಟಕಗಳು ಹೊಂದಿರಬೇಕಾದ ಮೂಲಭೂತ ಸೌಲಭ್ಯಗಳು, ಸ್ವಚ್ಛತೆ, ಸುಚಿತ್ವ, ರಾಸಾಯನಿಕ /ಹಾನಿಕಾರಕ ಪದಾರ್ಥಗಳ ಮೇಲೆ ಇರಬೇಕಾದಂತ ಗಮನ, ನೈಸರ್ಗಿಕ ರಾಸಾಯನಿಕ ಪದಾರ್ಥಗಳ ಅಪಾಯಗಳ ಕುರಿತು ಮೊನ್ನೆಚ್ಚರಿಕೆಯ ಕ್ರಮಗಳನ್ನು ವಹಿಸುವುದು, ಜೈವಿಕ ಹನಿಗಳ ತಡೆಯುವಿಕೆ, ಕುರಿತಂತೆ ಮಾಹಿತಿಯನ್ನು ವಿಡಿಯೋ ತೋರಿಸುವ ಮೂಲಕ ಹಾಗೂ ಮೌಕಿಕ ತರಬೇತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷರಾದ ಬಸವರಾಜ್ ಬೇವಿನಮರದರವರು ಮಾತನಾಡಿ ಮಹಿಳೆಯರಿಗೆ ಈ ತರಬೇತಿಯು ಅತ್ಯಂತ ಪ್ರಾಮುಖ್ಯತೆಯನ್ನು ನೀಡುತ್ತಿದ್ದು, ನಮ್ಮ ಚಂದನವನ ರೈತ ಉತ್ಪಾದಕ ಕಂಪನಿಯ ಷೇರುದಾರರು ಅನೇಕ ಆಹಾರ ಉತ್ಪಾದನೆ ಘಟಕಗಳನ್ನು ಹೊಂದಿದ್ದಾರೆ ಅದಕ್ಕಾಗಿ ಈ ತರಬೇತಿ ಆಯೋಜಿಸಲಾಗಿದೆ. ಈ ತರಬೇತಿಯನ್ನು ಆಯೋಜಿಸಿದ ವಾಲಮಾರ್ಟ್ ಹಾಗೂ ಐಸಾಪ್ ಫೌಂಡೇಶನ ಸಂಸ್ಥೆಯವರಿಗೆ ಗ್ರಾಮದ ಮಹಿಳೆಯರಪರವಾಗಿ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂಬ ಮಾತನ್ನು ತಿಳಿಸಿದರು.
ಸುಮಿತ್ ಜಂಬಗಿ ಜಿಲ್ಲಾ ಸಂಯೋಜಕರು ಐಸಾಪ್ ಫೌಂಡೇಶನ್ ಇವರು ಮಾತನಾಡಿ ನಮ್ಮ ಸಂಸ್ಥೆಯ ಒಟ್ಟಾರೆ ಉದ್ದೇಶ ಗ್ರಾಮೀಣ ಭಾಗದ ಮಹಿಳೆಯರು ಸ್ವ ಉದ್ಯೋಗ ಅದರಲ್ಲಿಯೂ ಆಹಾರ ಉತ್ಪಾದನೆ ಘಟಕಗಳನ್ನು ಹೊಂದಿದ್ದು ಈ ತರಬೇತಿ ಅವರ ಆರ್ಥಿಕ ಅಭಿವೃದ್ಧಿಗೆ ಹಾಗೂ ಸುರಕ್ಷತ ಆಹಾರ ಪದಾರ್ಥಗಳ ಸಿದ್ದಪಡಿಸುವಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬ ಮಾತನ್ನು ತಿಳಿಸಿದರು.
ಈ ತರಬೇತಿಯಲ್ಲಿ ಶ್ರೀ ಮತಿ ಅಕ್ಕಮ್ಮ ಆತ್ಮ ಯೋಜನೆ,ಕೃಷಿ ಇಲಾಖೆ ಡಂಬಳ. ಶ್ರೀ ಶಂಕರಗೌಡ ಪಾಟೀಲ, ತಿಮ್ಮಣ್ಣ ರಾಟಿ, ಬಸವರಾಜ್ ಹಮ್ಮಿಗಿ, ಬಸವರಾಜ್ ಪ್ಯಾಟಿ, ನಿರ್ದೇಶಕರು ಚಂದನವನ ಎಫ್ ಪಿ ಓ ಡಂಬಳ. ಶ್ರೀಮತಿ ಲಲಿತಾ ಜೊಂಡಿ ಎಮ್ ಬಿ ಕೆ, ಏನ್ ಆರ್ ಎಲ್ ಎಮ್ ಯೋಜನೆ ಮುಂಡರಗಿ. ಶ್ರೀಮತಿ ಲಕ್ಷ್ಮಿಭಾಯಿ ಮಹಿಳಾ ಸಾಮಖ್ಯ ಮುಂಡರಗಿ.
ಕುಮಾರ್ ಬೀರಪ್ಪ ಬಚನಳ್ಳಿ ಮುಖ್ಯ ಕಾರ್ಯನಿರ್ವಾಹಕ ಚಂದನವನ ಏಪ ಪಿ ಓ ಡಂಬಳ ಹಾಗೂ ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.